ಹೊಸಕೋಟೆ ಭಾಗದ ನರಸಾಪುರ ಕೈಗಾರಿಕಾ ಪ್ರದೇಶದ ಬೆಲ್‌ರೈಸ್ ಕಾರ್ಖಾನೆಯಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಮತ್ತು 300ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಿದ್ದರೂ ನಾಲ್ಕೈದು ಶೌಚಾಲಯಗಳಷ್ಟೇ ಇವೆ. ಶೌಚಾಲಯಗಳು ಅಶುಚಿಯಾಗಿದ್ದು ದುರ್ವಾಸನೆ ಬೀರುತ್ತಿವೆ. ನಿಯಮದಂತೆ ಪ್ರತಿ 50 ಮಂದಿಗೆ ಒಂದು ಶೌಚಾಲಯ ಬೇಕು. ಸಮಸ್ಯೆ ಎತ್ತಿದ 19 ಕಾರ್ಮಿಕರಿಗೆ ವರ್ಗಾವಣೆ ಸೇರಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಕಾರ್ಮಿಕರು ಶಾಂತಿಯುತ ಹೋರಾಟ ನಡೆಸುತ್ತಿದ್ದಾರೆ.
ಬೆಲ್‌ರೈಸ್ ಕಾರ್ಖಾನೆಯಲ್ಲಿ ಸಾವಿರ ಕಾರ್ಮಿಕರಿಗೆ ನಾಲ್ಕೇ ಶೌಚಾಲಯ
Source: Zee Kannada News