ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ವೇಳೆ 2031ರಲ್ಲಿ ನಡೆಯಲಿರುವ ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವದ ಪಂಚವಾರ್ಷಿಕ ಯೋಜನೆಯ ಲಾಂಛನವನ್ನು ಮೋದಿ ಅನಾವರಣಗೊಳಿಸಿದರು. ಸ್ವಾಮೀಜಿ ಮೋದಿಗೆ ಯಕ್ಷಗಾನ ರಾಜಕಿರೀಟ, ಸ್ವರ್ಣಲೇಪಿತ ಕೃಷ್ಣನ ಪ್ರತಿಮೆ ಹಾಗೂ ಮಂತ್ರಾಕ್ಷತೆ ನೀಡಿದರು. ಮೋದಿ ಈ ಭೇಟಿಯ ವಿವರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪೇಜಾವರ ಶ್ರೀಗಳ ಭೇಟಿ: ವಿಶ್ವೇಶ ತೀರ್ಥ ಶತಮಾನೋತ್ಸವ ಲಾಂಛನ ಅನಾವರಣ
Source: Vishwavani