ಸಿಕ್ಕಿಂನ ಗ್ಯಾಂಗ್‌ಟಕ್‌ನ ಟಾಡಾಂಗ್ ಪ್ರದೇಶದಲ್ಲಿ ಭಾರಿ ಮಳೆಯ ಬಳಿಕ ತಡರಾತ್ರಿ ಭೂಕುಸಿತ ಸಂಭವಿಸಿದೆ. ಪಶ್ಚಿಮ ಸಿಕ್ಕಿಂನ ರಿಂಬಿ ಗ್ರಾಮದಲ್ಲಿ ಮಣ್ಣು, ಬಂಡೆಗಳು ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸೇತುವೆಯೊಂದು ಕೊಚ್ಚಿಹೋಗಿದೆ. ರಿಂಬಿಯ 28 ಮನೆಗಳ 128 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಯಾವುದೇ ಸಾವುನೋವು ವರದಿಯಾಗಿಲ್ಲ.
ಸಿಕ್ಕಿಂನಲ್ಲಿ ಭಾರಿ ಮಳೆಯ ಬಳಿಕ ಭೂಕುಸಿತ; 128 ಮಂದಿ ಸ್ಥಳಾಂತರ
Source: Vishwavani