ಅಪಾಯಕಾರಿ ಕಳೆನಾಶಕ ಮಾರಾಟ ಪ್ರಕರಣದಲ್ಲಿ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ಗೆ ತಲಾ 10 ಲಕ್ಷ ರೂಪಾಯಿ, ಜಿಯೋಮಾರ್ಟ್ಗೆ 5 ಲಕ್ಷ ರೂಪಾಯಿ ದಂಡ ವಿಧಿಸಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಆದೇಶ ಹೊರಡಿಸಿದೆ. ನೋಂದಣಿಯಾಗದ 'Cyclosinone Herbicide' ಕಳೆನಾಶಕವನ್ನು ಆನ್ಲೈನ್ನಲ್ಲಿ ಮಾರಾಟ ಮಾಡಿದ್ದಕ್ಕಾಗಿ ಒಟ್ಟು 25 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ನಿಯಂತ್ರಿತ ಉತ್ಪನ್ನಗಳ ಪರಿಶೀಲನೆ ಇಲ್ಲದೆ ಮಾರಾಟ ಮಾಡಿದರೆ ಕ್ರಮ ಎಂದು CCPA ಎಚ್ಚರಿಸಿದೆ.
ಅಪಾಯಕಾರಿ ಕಳೆನಾಶಕ ಮಾರಾಟ: ಅಮೆಜಾನ್, ಫ್ಲಿಪ್ಕಾರ್ಟ್, ಜಿಯೋಮಾರ್ಟ್ಗೆ ದಂಡ
Source: Kannada Dunia