ಮೋದಿ ಪದವಿ ಪ್ರಕರಣ: ಕೆಜರಿವಾಲ್ ಅವರ ಮೇಲ್ಮನವಿ ತಿರಸ್ಕರಿಸಿದ ಗುಜರಾತ್ ಹೈಕೋರ್ಟ್

ಮೋದಿ ಪದವಿ ಪ್ರಕರಣ: ಕೆಜರಿವಾಲ್ ಅವರ ಮೇಲ್ಮನವಿ ತಿರಸ್ಕರಿಸಿದ ಗುಜರಾತ್ ಹೈಕೋರ್ಟ್

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಬಹಿರಂಗಪಡಿಸುವ ಸಿಐಸಿ ಆದೇಶವನ್ನು ರದ್ದುಗೊಳಿಸಿದ ಆದೇಶದ ವಿರುದ್ಧ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೆಜರಿವಾಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿತು. ಮಾರ್ಚ್ 31, 2023ರ ಏಕಸದಸ್ಯ ಪೀಠದ ಆದೇಶದಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸುನಿತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಡಿ.ಎನ್. ರೇ ಅವರ ವಿಭಾಗೀಯ ಪೀಠ ಹೇಳಿತು. ಕೆಜರಿವಾಲ್ ಅವರಿಗೆ ವಿಧಿಸಿದ್ದ 25,000 ರೂಪಾಯಿ ದಂಡವನ್ನೂ ಹೈಕೋರ್ಟ್ ಎತ್ತಿಹಿಡಿಯಿತು.

Source: Mangalorean

More in Politics

Read the live feed on ZapIndies