ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕನಿಷ್ಠ 2 ರನ್ ಗಳಿಸಿದರೆ, ಆರಂಭಿಕರಾಗಿ 10,000 ಏಕದಿನ ರನ್ ಪೂರೈಸಿದ ಎರಡನೇ ಭಾರತೀಯ ಮತ್ತು ಒಟ್ಟಾರೆ ನಾಲ್ಕನೇ ಆಟಗಾರರಾಗುತ್ತಾರೆ. ಸಚಿನ್ ತೆಂಡೂಲ್ಕರ್ (15,310) ನಂತರ ಈ ಸಾಧನೆ ಮಾಡಿದವರಲ್ಲಿ ಸನತ್ ಜಯಸೂರ್ಯ (12,740) ಮತ್ತು ಕ್ರಿಸ್ ಗೇಲ್ (10,179) ಇದ್ದಾರೆ. ಅದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ 103 ರನ್ ಗಳಿಸಿದರೆ, ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ ಜಾಕ್ವೆಸ್ ಕಾಲಿಸ್ (4,120) ದಾಖಲೆ ಮುರಿಯುತ್ತಾರೆ.
ರೋಹಿತ್‌ಗೆ 2 ರನ್ ಸಾಕು, ಸಚಿನ್ ಎಲೈಟ್ ಪಟ್ಟಿ ಸೇರಲು
Source: Vishwavani