ಅಮೆರಿಕದ ಹಿಂದೂ ದೇವಾಲಯದ ಮೇಲೆ ಇಟ್ಟಿಗೆ ದಾಳಿ

ಅಮೆರಿಕದ ಹಿಂದೂ ದೇವಾಲಯದ ಮೇಲೆ ಇಟ್ಟಿಗೆ ದಾಳಿ

ಅಮೆರಿಕದ ಓಹಿಯೋ ರಾಜ್ಯದ ರಿಚ್ಮಂಡ್ ಹೈಟ್ಸ್ನಲ್ಲಿರುವ ಸ್ವಾಮಿನಾರಾಯಣ ಹಿಂದೂ ಟೆಂಪಲ್ ವಡ್ತಾಲ್ಧಾಮ್ ದೇವಾಲಯದ ಮೇಲೆ ಶುಕ್ರವಾರ ಇಟ್ಟಿಗೆಗಳಿಂದ ದಾಳಿ ನಡೆದು ಕಿಟಕಿ ಗಾಜುಗಳು ಒಡೆದಿವೆ. ದಾಳಿ ವೇಳೆ ಒಳಗೆ ಅರ್ಚಕರು ಮತ್ತು ಭಕ್ತರಿದ್ದರು. ಹಿಂದೂ ಅಮೆರಿಕನ್ ಫೌಂಡೇಶನ್ ಮತ್ತು ಕೋಯಲಿಷನ್ ಆಫ್ ಹಿಂದೂಸ್ ಆಫ್ ನಾರ್ತ್ ಅಮೆರಿಕ ಈ ಘಟನೆಯನ್ನು ಖಂಡಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಮೇಯರ್ ಕಿಮ್ ಥಾಮಸ್ ಅವರನ್ನು ಒತ್ತಾಯಿಸಿವೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

Source: Vishwavani

More in Crime

Read the live feed on ZapIndies