ಸಿಜೆಪಿ ಪ್ರತಿಭಟನೆಯಲ್ಲಿ 75ರ ವೃದ್ಧರಿಗೆ ಹೃದಯಾಘಾತ: ಸಾವು

ಸಿಜೆಪಿ ಪ್ರತಿಭಟನೆಯಲ್ಲಿ 75ರ ವೃದ್ಧರಿಗೆ ಹೃದಯಾಘಾತ: ಸಾವು

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 75 ವರ್ಷದ ಗೋಪಾಲಕೃಷ್ಣ ಸುಬ್ಬಯ್ಯ ಪಿಳ್ಳೈ ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಥಾಣೆ ನಿವಾಸಿಯಾಗಿದ್ದ ಅವರು ಗುರುವಾರ ಸಂಜೆ 4.30ರ ಸುಮಾರಿಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರು. ಸಂಜೆ 5ರ ಸುಮಾರಿಗೆ ಗೇಟ್ ಸಂಖ್ಯೆ 6ರ ಬಳಿ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಚಿಕಿತ್ಸೆ ವೇಳೆ ನಿಧನರಾದರು. ಪೊಲೀಸರು ಆಕಸ್ಮಿಕ ಸಾವಿನ ವರದಿ ದಾಖಲಿಸಿದ್ದಾರೆ.

Source: Vishwavani

More in Top Stories

Read the live feed on ZapIndies