ಪಾಕಿಸ್ತಾನವು ಚೀನಾದಿಂದ ಐದನೇ ತಲೆಮಗಿನ J-35A ಸ್ಟೆಲ್ತ್ ಯುದ್ಧವಿಮಾನಗಳನ್ನು ಪಡೆಯುತ್ತಿರುವುದು ಕಳವಳಕಾರಿ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಹೇಳಿದ್ದಾರೆ. ಪಾಕ್ ಪೈಲಟ್‌ಗಳಿಗೆ ಚೀನಾದಲ್ಲೇ ತರಬೇತಿ ನೀಡುತ್ತಿರುವುದೂ ಆತಂಕಕ್ಕೆ ಕಾರಣ. ಭಾರತದಲ್ಲಿ ಮಿಗ್-21 ನಿವೃತ್ತಿಯ ನಂತರ ಯುದ್ಧವಿಮಾನ ಸ್ಕ್ವಾಡ್ರನ್ 29ಕ್ಕೆ ಇಳಿದಿದ್ದು, 42ಕ್ಕಿಂತ ಹೆಚ್ಚು ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಪಾಕ್‌ಗೆ ಚೀನಾದ J-35A ವಿಮಾನ: ಭಾರತ ವಾಯುಪಡೆ ಆತಂಕ
Source: Vartha Bharati