ಬೆಂಗಳೂರು–ಮುಂಬೈ ನಡುವೆ ಶೀಘ್ರದಲ್ಲೇ ಆರಂಭವಾಗಲಿರುವ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್‌ಗೆ ಆಂಧ್ರಪ್ರದೇಶದ ಅನಂತಪುರ ಮತ್ತು ಗುಂತಕಲ್‌ನಲ್ಲಿ ನಿಲುಗಡೆ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ತಿಂಗಳಲ್ಲೇ ಸೇವೆ ಆರಂಭವಾಗುವ ಸಾಧ್ಯತೆಯಿದ್ದು, ವಾರದಲ್ಲಿ ಆರು ದಿನ ಸಂಚರಿಸಲಿದೆ. ಸುಮಾರು 16 ಗಂಟೆಗಳ ಪ್ರಯಾಣಾವಧಿಯ ಈ ರೈಲು ರಾಯಲಸೀಮೆ ಭಾಗದ ಪ್ರಯಾಣಿಕರಿಗೆ ಬೆಂಗಳೂರು, ಮುಂಬೈ ಸೇರಿದಂತೆ ಪ್ರಮುಖ ನಗರಗಳಿಗೆ ವೇಗದ ಸಂಪರ್ಕ ಕಲ್ಪಿಸಲಿದೆ.
ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್‌ಗೆ ಆಂಧ್ರದಲ್ಲಿ ಎರಡು ನಿಲ್ದಾಣ
Source: OneIndia Kannada