ನಂದಿನಿ ಹಾಲಿನ ದರ ಲೀಟರ್‌ಗೆ ₹8 ಏರಿಕೆಯಾಗುವ ಸಾಧ್ಯತೆಯಿದೆ. ಸಚಿವ ಸಂಪುಟದ ಒಪ್ಪಿಗೆ ದೊರೆತಿದ್ದರೂ, ವಿಧಾನ ಪರಿಷತ್ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಧಿಕೃತ ಜಾರಿ ತಡವಾಗಲಿದೆ. ಚುನಾವಣೆ ಅಕ್ಟೋಬರ್ 27ರಂದು ಮುಗಿದ ಬಳಿಕ ದರ ಪರಿಷ್ಕರಣೆ ಜಾರಿಗೆ ಬರಬಹುದು. ಇದರಿಂದ ಮೊಸರು, ಚಹಾ, ಕಾಫಿ ಸೇರಿದಂತೆ ಹಾಲಿನ ಉತ್ಪನ್ನಗಳ ಬೆಲೆಯೂ ಏರಬಹುದು. ಬಸ್ ಟಿಕೆಟ್ ದರ ಹೆಚ್ಚಳದ ಬೇಡಿಕೆಯೂ ಚರ್ಚೆಯಲ್ಲಿದೆ.
ನಂದಿನಿ ಹಾಲಿನ ದರ ಲೀಟರ್‌ಗೆ ₹8 ಏರಿಕೆ ಸಾಧ್ಯತೆ
Source: Zee Kannada News