ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನಲ್ಲಿ ಅತ್ಯಾಧುನಿಕ ಎಐ ಆಧಾರಿತ ಸ್ವಾಗತ ಕಮಾನ್‌ಗಳನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಲೋಕಾರ್ಪಣೆಗೊಳಿಸಿದರು. ಪ್ರವಾಸಿಗರಿಗೆ ಹಾಗೂ ತೋಟಗಾರಿಕಾ ಬೆಳೆಗಾರರಿಗೆ ಅಂತಾರಾಷ್ಟ್ರೀಯ ಮಟ್ಟದ ಡಿಜಿಟಲ್ ಅನುಭವ ನೀಡುವುದು ಇದರ ಉದ್ದೇಶ. ಬಳಿಕ ನಡೆದ ಸಭೆಯಲ್ಲಿ ಬೆಳೆಗಾರರಿಗೆ ಟ್ರಾಕ್ಟರ್, ಕೃಷಿ ಹೊಂಡ, ಶೀತಲೀಕರಣ ಘಟಕ ಸೇರಿ ವಿವಿಧ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಲಾಲ್‌ಬಾಗ್‌ನಲ್ಲಿ ಎಐ ಆಧಾರಿತ ಸ್ವಾಗತ ಕಮಾನ್‌ಗಳ ಲೋಕಾರ್ಪಣೆ
Source: Vishwavani