ಅಮೆರಿಕದ ಗ್ರೀನ್ ಕಾರ್ಡ್ ಪ್ರಕ್ರಿಯೆಗೆ ಸಂಬಂಧಿಸಿದ PERM ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದ ನಡುವೆಯೂ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ತನ್ನ ನೇಮಕಾತಿ ಕಾರ್ಯತಂತ್ರದ ಮೇಲೆ ಪರಿಣಾಮವಿಲ್ಲ ಎಂದು ಸ್ಪಷ್ಟಪಡಿಸಿದೆ. ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಲ್ಲಿ 15,000 ಸ್ಥಳೀಯ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಯೋಜನೆಯನ್ನು ಪುನರುಚ್ಚರಿಸಿದೆ. ಕಳೆದ ಎರಡು ವರ್ಷಗಳಲ್ಲಿ PERM ಅರ್ಜಿಗಳ ಸಂಖ್ಯೆ ಕಡಿಮೆಯಿದ್ದುದರಿಂದ ಸ್ಥಗಿತದ ಪರಿಣಾಮ ತೀವ್ರವಾಗಿಲ್ಲ ಎಂದು ಕಂಪನಿ ತಿಳಿಸಿದೆ.
ಗ್ರೀನ್ ಕಾರ್ಡ್ ನಿರ್ಬಂಧದ ನಡುವೆಯೂ ಟಿಸಿಎಸ್ 15,000 ಉದ್ಯೋಗ ಸೃಷ್ಟಿ ಯೋಜನೆ
Source: Kannada Dunia