ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆಯಲ್ಲಿ ಕುಟುಂಬವೊಂದು ಸಿನಿಮಾ ನೋಡಲು ತೆರಳಿದ ಸಮಯವನ್ನು ಬಳಸಿಕೊಂಡು ಕಳ್ಳನೊಬ್ಬ ಮನೆಗೆ ನುಗ್ಗಿ 130 ಗ್ರಾಂ ಚಿನ್ನ ಕಳವು ಮಾಡಿದ್ದಾನೆ. ಮಾಲೀಕ ಕೃಷ್ಣಪ್ಪ ಮನೆಗೆ ವಾಪಸ್ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿದ್ದನ್ನು ಕಂಡು ಸಿಸಿಟಿವಿ ಪರಿಶೀಲಿಸಿದ್ದಾರೆ. ಮಂಚದ ಕೆಳಗೆ ಅವಿತಿದ್ದ ಆರೋಪಿಯನ್ನು ಚಿನ್ನದ ಸಮೇತ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ಸಿನಿಮಾ ನೋಡಲು ಹೋದ ಮನೆಗೆ ನುಗ್ಗಿದ ಕಳ್ಳ ಮಂಚದಡಿ ಸಿಕ್ಕಿಬಿದ್ದ
Source: Zee Kannada News