ನೇಪಾಳದ ಗೋರಖಾ ಜಿಲ್ಲೆಯಲ್ಲಿ ಬುಧಿ ಗಂಡಕಿ ನದಿ ಏಕಾಏಕಿ ಉಕ್ಕಿ ಹರಿದು 35ಕ್ಕೂ ಹೆಚ್ಚು ಮನೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿವೆ. ಚುಮ್ನುಬ್ರಿಯಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಸಂಭವಿಸಿದ ಪ್ರವಾಹದಲ್ಲಿ 10 ಮಂದಿ ಕಾಣೆಯಾಗಿದ್ದಾರೆ. ನೇಪಾಳ ಸೇನೆ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿ ನಿವಾಸಿಗಳನ್ನು ಸ್ಥಳಾಂತರಿಸುತ್ತಿದೆ. ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳದ ಗೋರಖಾದಲ್ಲಿ ಬುಧಿ ಗಂಡಕಿ ನದಿ ಉಕ್ಕಿ ಹರಿದು ಭಾರಿ ಹಾನಿ
Source: Vishwavani