ಹಾವೇರಿಯ ಸಿಸಿಟಿವಿ ಉದ್ಯಮಿಯನ್ನು ಹೂಡಿಕೆಯ ಆಮಿಷವೊಡ್ಡಿ ಬೆಂಗಳೂರಿಗೆ ಕರೆಸಿ, ಹನಿಟ್ರ್ಯಾಪ್ ಮಾಡಿ ₹2 ಕೋಟಿ ಸುಲಿಗೆಗೆ ಯತ್ನಿಸಿದ ಆರೋಪ ಕೇಳಿಬಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಮಹಿಳೆ ಅ.28ರಂದು ರಾಜರಾಜೇಶ್ವರಿ ನಗರಕ್ಕೆ ಕರೆಸಿ, 6-7 ಮಂದಿ ಸೇರಿ ಅರೆಬೆತ್ತಲೆ ವಿಡಿಯೋ ಚಿತ್ರೀಕರಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಉದ್ಯಮಿ ಅ.29ರಂದು ದೂರು ನೀಡಿದ್ದು, ಬಿಎನ್ಎಸ್ ಕಲಂ 308(2) ಅಡಿ ಪ್ರಕರಣ ದಾಖಲಾಗಿದೆ.
ಹಾವೇರಿ ಉದ್ಯಮಿಗೆ ಹನಿಟ್ರ್ಯಾಪ್ ಬಲೆ: ₹2 ಕೋಟಿ ಸುಲಿಗೆ ಆರೋಪ
Source: Vishwavani