ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಉಳಿಕೆ ಮೂಲ ವೃಂದದ ವಿವಿಧ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸಿದೆ. ಕಾರಾಗೃಹ ಇಲಾಖೆಯ ವಾರ್ಡರ್, ವಾರ್ಡರ್ ಕಮ್ ನರ್ಸಿಂಗ್ ಹಾಗೂ ದ್ವಿತೀಯ ದರ್ಜೆ ಬೋಧಕರ ಗ್ರೇಡ್-2 ಸೇರಿ 576 ಹುದ್ದೆಗಳಿಗೆ ನ.20 ಮತ್ತು 21ರಂದು ಪರೀಕ್ಷೆ ನಡೆಯಲಿದೆ. ವಸತಿ ಶಾಲಾ ಶಿಕ್ಷಕರ 767 ಹುದ್ದೆಗಳಿಗೆ ನ.22ರಿಂದ 30ರವರೆಗೆ ವಿಷಯವಾರು ಪರೀಕ್ಷೆಗಳು ನಡೆಯಲಿವೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ವಾರ್ಡರ್, ಶಿಕ್ಷಕ ಸೇರಿ ವಿವಿಧ ಹುದ್ದೆಗಳ ಪರೀಕ್ಷೆ ದಿನಾಂಕ ಪ್ರಕಟ
Source: Kannada Dunia