ಭಾರತೀಯ ಪರ್ವತಾರೋಹಿ ಕವಿತಾ ಚಂದ್, ಆಫ್ರಿಕಾದ ಅತಿ ಎತ್ತರದ ಶಿಖರ ಮೌಂಟ್ ಕಿಲಿಮಂಜಾರೋವನ್ನು ಕೇವಲ 12 ಗಂಟೆ 46 ನಿಮಿಷಗಳಲ್ಲಿ ಏರಿ ದಾಖಲೆ ನಿರ್ಮಿಸಿದ್ದಾರೆ. ಮ್ವೆಕಾ ಗೇಟ್‌ನಿಂದ 5,895 ಮೀಟರ್ ಶಿಖರ ತಲುಪಿ ಹಿಂತಿರುಗಿ, ಸಂಪೂರ್ಣ ಪ್ರಯಾಣವನ್ನು 22 ಗಂಟೆ 36 ನಿಮಿಷಗಳಲ್ಲಿ ಪೂರ್ಣಗೊಳಿಸಿದ ಮೊದಲ ಭಾರತೀಯರಾದರು. ಸಾಮಾನ್ಯವಾಗಿ ಈ ಆರೋಹಣಕ್ಕೆ ಐದರಿಂದ ಒಂಬತ್ತು ದಿನ ಬೇಕು. ಇದು ಅವರ ಸೆವೆನ್ ಸಮ್ಮಿಟ್ಸ್ ಪ್ರಯಾಣದ ಐದನೇ ಶಿಖರ.
ಕಿಲಿಮಂಜಾರೋ ಏರಿ ಕವಿತಾ ಚಂದ್ ದಾಖಲೆ
Source: Kannada Dunia