ಯೆಮೆನ್ನ ನೈರುತ್ಯ ತೈಜ್ ಪ್ರಾಂತ್ಯದ ಜನನಿಬಿಡ ಮಾರುಕಟ್ಟೆಯ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 30 ನಾಗರಿಕರು ಸಾವನ್ನಪ್ಪಿದ್ದು, 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹತ್ತಾರು ಅಂಗಡಿಗಳು ಧ್ವಂಸಗೊಂಡಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಹೌತಿ ಬಂಡುಕೋರರು ಸೌದಿ ನೇತೃತ್ವದ ಒಕ್ಕೂಟದ ವೈಮಾನಿಕ ದಾಳಿ ಎಂದು ಆರೋಪಿಸಿದರೆ, ಒಕ್ಕೂಟ ಮತ್ತು ಯೆಮನ್ ಸರ್ಕಾರಿ ಪಡೆಗಳು ಅದನ್ನು ನಿರಾಕರಿಸಿ ಹೌತಿಗಳೇ ಕ್ಷಿಪಣಿ ದಾಳಿ ನಡೆಸಿದ್ದಾರೆ ಎಂದು ಹೇಳಿವೆ.
ಯೆಮೆನ್ನ ತೈಜ್ ಮಾರುಕಟ್ಟೆಯಲ್ಲಿ ದಾಳಿ: 30 ನಾಗರಿಕರ ಸಾವು
Source: Vishwavani