ಶಿವಮೊಗ್ಗ ತಾಲೂಕಿನ ಬಸವಾಪುರದಲ್ಲಿ ಭತ್ತದ ಗದ್ದೆಗೆ ಅಕ್ರಮವಾಗಿ ಹಾಕಿದ್ದ ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಮೃತಪಟ್ಟಿದೆ. ಘಟನೆಗೆ ಸಂಬಂಧಿಸಿ ಅರಣ್ಯ ಇಲಾಖೆ ಅಲಿಮಿಯಾ ಅಲಿಯಾಸ್ ಸೈಯದ್ ಅಲಿಯನ್ನು ಬಂಧಿಸಿದೆ. ಇದೇ ವೇಳೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಕುಪ್ಪಲುವಿನ ಎಸ್ಟೇಟ್ ಮನೆಯಲ್ಲಿ 52 ವರ್ಷದ ಕಾರ್ಮಿಕ ಲಕ್ಷ್ಮಣನನ್ನು ಅಪರಿಚಿತರು ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ವಿದ್ಯುತ್ ಬೇಲಿಗೆ ಆನೆ ಬಲಿ; ಚಿಕ್ಕಮಗಳೂರಿನಲ್ಲಿ ಕಾರ್ಮಿಕನ ಹತ್ಯೆ
Source: Zee Kannada News