ಬುಲಂದ್‌ಶಹರ್‌ನಲ್ಲಿ 8 ವರ್ಷದ ಬಾಲಕಿ ಅತ್ಯಾಚಾರ-ಹತ್ಯೆ

ಬುಲಂದ್‌ಶಹರ್‌ನಲ್ಲಿ 8 ವರ್ಷದ ಬಾಲಕಿ ಅತ್ಯಾಚಾರ-ಹತ್ಯೆ

ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ 8 ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಆರೋಪಿ ರವಿ ಕಶ್ಯಪ್ ಎಂದು ಗುರುತಿಸಲಾಗಿದ್ದು, ಆತ ಬಾಲಕಿಯನ್ನು ಗೋಲ್‌ಗೊಪ್ಪ ಕೊಡಿಸುವುದಾಗಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ದೌರ್ಜನ್ಯ ಎಸಗಿ, ಕಬ್ಬಿಣದ ಸರಳಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಶನಿವಾರ ಮುಂಜಾನೆ ಮೃತದೇಹ ಪತ್ತೆಯಾಗಿದ್ದು, ಸಿಕಂದರಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ನಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಶೀಘ್ರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Source: Vishwavani

More in Crime

Read the live feed on ZapIndies