ಅಯೋಧ್ಯೆಯಲ್ಲಿ ನಡೆದ 10ನೇ ದೀಪೋತ್ಸವದಲ್ಲಿ ಸರಯೂ ನದಿ ದಂಡೆಯ 56 ಘಾಟ್‌ಗಳಲ್ಲಿ 30 ಲಕ್ಷ ಹಣತೆ ಬೆಳಗಿ ಹೊಸ ವಿಶ್ವ ದಾಖಲೆ ನಿರ್ಮಾಣವಾಯಿತು. ಕಳೆದ ವರ್ಷ 26 ಲಕ್ಷ ಹಣತೆ ಬೆಳಗಿ ಗಿನ್ನೆಸ್ ದಾಖಲೆ ಮಾಡಲಾಗಿತ್ತು. 35,000 ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಈ ಕಾರ್ಯದಲ್ಲಿ ಪಾಲ್ಗೊಂಡರು. 2,100 ಡ್ರೋನ್‌ಗಳ ಪ್ರದರ್ಶನ ಮತ್ತು 2,500 ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಅಯೋಧ್ಯೆಯಲ್ಲಿ 30 ಲಕ್ಷ ಹಣತೆ ಬೆಳಗಿ ಹೊಸ ವಿಶ್ವ ದಾಖಲೆ
Source: Vishwavani