2026ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ (PG NEET MD/MS) ಕೋರ್ಸ್‌ಗಳ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ. ಒಟ್ಟು 3,268 ಅಭ್ಯರ್ಥಿಗಳಿಗೆ ಸೀಟು ಹಂಚಿಕೆಯಾಗಿದ್ದು, ಆಯ್ಕೆ ದಾಖಲಿಸಲು ನ.11ರವರೆಗೆ ಅವಕಾಶವಿದೆ. ಶುಲ್ಕ ಪಾವತಿ ನ.12ರೊಳಗೆ ಪೂರ್ಣಗೊಳಿಸಬೇಕು; ಚಾಯ್ಸ್-1 ಆಯ್ಕೆ ಮಾಡಿದವರು ನ.13ರವರೆಗೆ ಮೂಲ ದಾಖಲೆ ಸಲ್ಲಿಸಿ, ನ.14ರ ಸಂಜೆ 5.30ರೊಳಗೆ ಕಾಲೇಜಿಗೆ ವರದಿ ಮಾಡಬೇಕು.
ಪಿಜಿ ವೈದ್ಯಕೀಯ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ
Source: Kannada Dunia