ಹಾವೇರಿ ಜಿಲ್ಲೆಯಲ್ಲಿ ಪ್ರಜಾಸೇವಾ ಆಂದೋಲನದಡಿ 1,500 ಅರ್ಜಿಗಳು ಸ್ವೀಕೃತವಾಗಿದ್ದು, 1,200 ವಿಲೇವಾರಿಯಾಗಿವೆ. ಬಾಕಿ 300 ಅರ್ಜಿಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದು ಸಚಿವ ರುದ್ರಪ್ಪ ಲಮಾಣಿ ಅಧಿಕಾರಿಗಳಿಗೆ ಸೂಚಿಸಿದರು. ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರು ಕಚೇರಿಗಳಿಗೆ ಅಲೆದಾಡದಂತೆ ಸ್ಥಳೀಯವಾಗಿಯೇ ಸಮಸ್ಯೆ ಪರಿಹರಿಸುವ ಉದ್ದೇಶ ಸರ್ಕಾರದ್ದು ಎಂದರು.
ಜಿಲ್ಲೆಯಲ್ಲಿ 1,500 ಅರ್ಜಿ ಸ್ವೀಕಾರ, 1,200 ವಿಲೇವಾರಿ: ಸಚಿವ ರುದ್ರಪ್ಪ ಲಮಾಣಿ
Source: Vishwavani