ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಪತ್ನಿ ಬಂಗಾರಿ ಗಾವಡೆ ಮತ್ತು ಪ್ರಿಯಕರ ರಾಮಾ ಸೇರಿ ಪತಿ ರಾಘು ಗಾವಡೆ (40) ಅವರನ್ನು ಕೊಲೆ ಮಾಡಿದ್ದಾರೆ. ಅಕ್ರಮ ಸಂಬಂಧ ಬಯಲಾದಾಗ ಗಂಡ ಪ್ರಶ್ನಿಸಿದ್ದಕ್ಕೆ ಈ ಕೃತ್ಯ ಎಸಗಲಾಗಿದೆ. ಆರು ತಿಂಗಳ ಬಳಿಕ ರಾಘು ಅವರ ತಾಯಿಯ ಮರಣದ ಸಂದರ್ಭದಲ್ಲಿ ಅನುಮಾನ ಬಂದು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.
ಬೆಳಗಾವಿಯಲ್ಲಿ ಪತ್ನಿ-ಪ್ರಿಯಕರನಿಂದ ಪತಿ ಕೊಲೆ; ಆರು ತಿಂಗಳ ಬಳಿಕ ಬಯಲು
Source: Zee Kannada News