ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಗೋಬಿ ತಿನ್ನುತ್ತಿದ್ದ ಯುವಕ ಅರ್ಜುನ್ ಮೇಲೆ ಮೂವರು ದುಷ್ಕರ್ಮಿಗಳು ಚಾಕುವಿನಿಂದ ದಾಳಿ ನಡೆಸಿದ್ದಾರೆ. 'ನೀವು ಲಂಬಾಣಿಯೇ?' ಎಂಬ ಪ್ರಶ್ನೆಗೆ 'ಹೌದು' ಎಂದು ಉತ್ತರಿಸಿದ್ದಕ್ಕೆ ಕಿರಿಕ್ ಶುರುವಾಗಿ, ಹೊಟ್ಟೆಗೆ ಚಾಕು ಇರಿದಿದ್ದಾರೆ. ಗಂಭೀರ ಗಾಯಗೊಂಡ ಅರ್ಜುನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಆನೇಕಲ್ನಲ್ಲಿ ಯುವಕನಿಗೆ ಚಾಕು ಇರಿತ: ಲಂಬಾಣಿ ಪ್ರಶ್ನೆಗೆ ಉತ್ತರವೇ ಕಾರಣ
Source: Zee Kannada News