ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಹಿಳೆ ಮತ್ತು ಮಗುವಿನೊಂದಿಗೆ ದೋಣಿಯಲ್ಲಿ ಕುಳಿತಿರುವ ಫೋಟೋವನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹಂಚಿಕೊಂಡು ಪ್ರಶ್ನಿಸಿದ್ದಾರೆ. ಚಿತ್ರದಲ್ಲಿರುವವರು ರಾಹುಲ್ ಅವರ ಸ್ನೇಹಿತನ ಪತ್ನಿ ಮತ್ತು ಮಗ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಈ ಫೋಟೋ ಟೆಕ್ಸಾಸ್ನ ಲೇಕ್ ರೇ ರಾಬರ್ಟ್ಸ್ನಲ್ಲಿ ತೆಗೆದದ್ದು ಎಂದು ಐಒಸಿ ಮಾಹಿತಿ ನೀಡಿದೆ.
ರಾಹುಲ್ ಜೊತೆಗಿನ ಫೋಟೋ ವೈರಲ್: ಗಿರಿರಾಜ್ ಸಿಂಗ್ ಪ್ರಶ್ನೆಗೆ ಕಾಂಗ್ರೆಸ್ ಸ್ಪಷ್ಟನೆ
Source: Vishwavani