ಕೇಂದ್ರ ಕ್ರೀಡಾ ಸಚಿವಾಲಯವು ಆಡಳಿತಾತ್ಮಕ ವೈಫಲ್ಯ, ಸಮಯಕ್ಕೆ ಚುನಾವಣೆ ನಡೆಸದಿರುವುದು ಮತ್ತು ಮನಿಕಾ ಬಾತ್ರಾ ಆಯ್ಕೆ ವಿವಾದದ ಹಿನ್ನೆಲೆಯಲ್ಲಿ ಟಿಟಿಎಫ್ಐ ಮಾನ್ಯತೆಯನ್ನು ಅಮಾನತುಗೊಳಿಸಿದೆ. ಫೆಡರೇಷನ್ ನಿರ್ವಹಣೆಗಾಗಿ ಆಡ್-ಹಾಕ್ ಸಮಿತಿ ರಚಿಸುವಂತೆ ಐಒಎಗೆ ನಿರ್ದೇಶಿಸಲಾಗಿದ್ದು, ಏಷ್ಯನ್ ಗೇಮ್ಸ್ ತಯಾರಿಗೆ ಅಡ್ಡಿಯಾಗುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಟಿಟಿಎಫ್ಐ ಮಾನ್ಯತೆ ಅಮಾನತು; ಆಡ್-ಹಾಕ್ ಸಮಿತಿ ರಚನೆಗೆ ಐಒಎಗೆ ನಿರ್ದೇಶನ
Source: Vijaya Karnataka