ಕೆಕೆಆರ್ಟಿಸಿಗೆ 400 ಹೊಸ ಬಸ್ ಖರೀದಿಗೆ ಸಂಪುಟ ಒಪ್ಪಿಗೆ

ಕೆಕೆಆರ್ಟಿಸಿಗೆ 400 ಹೊಸ ಬಸ್ ಖರೀದಿಗೆ ಸಂಪುಟ ಒಪ್ಪಿಗೆ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಕೆಕೆಆರ್ಟಿಸಿ) 400 ಹೊಸ ಬಸ್ಗಳನ್ನು ಖರೀದಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರತಿ ಬಸ್ಗೆ ಸುಮಾರು ರೂ. 38 ಲಕ್ಷದಂತೆ ಒಟ್ಟು ರೂ. 152 ಕೋಟಿ ವೆಚ್ಚವಾಗಲಿದ್ದು, ಶೇ.50ರಷ್ಟು ಅನುದಾನವನ್ನು ಕೆಕೆಆರ್ಡಿಬಿ ಮತ್ತು ಉಳಿದ ಶೇ.50ರಷ್ಟನ್ನು ರಾಜ್ಯ ಸರ್ಕಾರ ಭರಿಸಲಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆ ನೀಗಿಸಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Source: Vishwavani

More in Top Stories

Read the live feed on ZapIndies