ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಆ್ಯಪ್ ಆಧಾರಿತ ವಾಹನ ಸೇವಾ ಕಂಪನಿಗಳಿಗೆ ಪ್ರಯಾಣಕ್ಕೂ ಮುನ್ನ ಟಿಪ್ ಕೇಳುವ ಆಯ್ಕೆಯನ್ನು ತಕ್ಷಣ ತೆಗೆದುಹಾಕುವಂತೆ ಸೂಚಿಸಿದೆ. ಟಿಪ್ ಸ್ವಯಂಪ್ರೇರಿತವಾಗಿರಬೇಕು ಮತ್ತು ಪ್ರಯಾಣದ ಬಳಿಕ ಮಾತ್ರ ನೀಡಬೇಕು. ಹೆಚ್ಚುವರಿ ಹಣ ಪಾವತಿಸಿದರೆ ಉತ್ತಮ ಸೇವೆ ಸಿಗಬಹುದೆಂಬ ಭಾವನೆ ಮೂಡಿಸುವುದನ್ನು ನಿಷೇಧಿಸಲಾಗಿದೆ.
ಪ್ರಯಾಣಕ್ಕೂ ಮುನ್ನ ಟಿಪ್ ಕೇಳುವ ಆಯ್ಕೆ ತೆಗೆಯಿರಿ: ಸಚಿವಾಲಯ
Source: Prajavani