ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಹೆಜ್ಜಾಲದಲ್ಲಿ ನಕಲಿ ಔಷಧಿ ದಂಧೆ ಪತ್ತೆಯಾಗಿದ್ದು, ಸುಮಾರು 5 ಕೋಟಿ ರೂ. ಮೌಲ್ಯದ ಔಷಧಿಗಳನ್ನು ಜಪ್ತಿ ಮಾಡಲಾಗಿದೆ. ಕ್ಯಾನ್ಸರ್ ಮತ್ತು ಐಸಿಯುನಲ್ಲಿ ಬಳಸುವ ಜೀವರಕ್ಷಕ ಔಷಧಿಗಳಿಗೆ ಖ್ಯಾತ ಬಹುರಾಷ್ಟ್ರೀಯ ಕಂಪನಿಗಳ ನಕಲಿ ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿತ್ತು. ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಲು ಸರ್ಕಾರ ಆದೇಶಿಸಿದೆ.
ಬಿಡದಿ ಬಳಿ ನಕಲಿ ಔಷಧಿ ದಂಧೆ ಬಯಲು: 5 ಕೋಟಿ ಮೌಲ್ಯದ ಜಪ್ತಿ
Source: Public TV