ದರ್ಶನ್ ಕಟೌಟ್ ಮುಂದೆ ದೇವಿ ಚಿತ್ರದ ಆಕ್ಷನ್ ಸೀನ್ ಶೂಟಿಂಗ್

ದರ್ಶನ್ ಕಟೌಟ್ ಮುಂದೆ ದೇವಿ ಚಿತ್ರದ ಆಕ್ಷನ್ ಸೀನ್ ಶೂಟಿಂಗ್

ಮಂಡ್ಯದ ಚೇತನ್‌ಗೌಡ ನಾಯಕನಾಗಿ ನಟಿಸುತ್ತಿರುವ 'ದೇವಿ' ಚಿತ್ರದ ಪ್ರಮುಖ ಆಕ್ಷನ್ ದೃಶ್ಯವನ್ನು ಬೆಂಗಳೂರಿನ ಲಗ್ಗೆರೆಯ ಆಕಾಶ್ ಚಿತ್ರಮಂದಿರದ ಮುಂದೆ ದರ್ಶನ್ ಅವರ 50 ಅಡಿ ಕಟೌಟ್ ಎದುರು ಚಿತ್ರೀಕರಿಸಲಾಗುತ್ತಿದೆ. ಚಿತ್ರದಲ್ಲಿ ದರ್ಶನ್ ಅಭಿಮಾನಿಯ ಪಾತ್ರದಲ್ಲಿ ಚೇತನ್‌ಗೌಡ ನಟಿಸಿದ್ದು, ಶರತ್‌ಬಾಬು ಮುಖ್ಯ ವಿಲನ್ ಆಗಿದ್ದಾರೆ. ನಿರ್ದೇಶಕ ಪ್ರಕಾಶ್‌ಕುಮಾರ್ ಪ್ರಕಾರ, ಈಗಾಗಲೇ 7-8 ದಿನಗಳ ಶೂಟಿಂಗ್ ಮುಗಿದಿದ್ದು, ಇನ್ನೂ 45 ದಿನಗಳ ಚಿತ್ರೀಕರಣ ಬಾಕಿ ಇದೆ.

Source: Zee Kannada News

More in Entertainment

Read the live feed on ZapIndies