ದಾವಣಗೆರೆಯ ಬನಶಂಕರಿ ಬಡಾವಣೆಯಲ್ಲಿ ಷೇರು ವ್ಯಾಪಾರಿ ಕೆ.ಬಿ. ರಮೇಶ್ ಕುಮಾರ್, ಪತ್ನಿ ಜಯಶೀಲಾ, ಮಗ ಹಿತೇಶ್ ಮತ್ತು ಪುತ್ರಿ ಪ್ರೇರಣಾ ನಾಪತ್ತೆಯಾಗಿದ್ದಾರೆ. ಮನೆಯಲ್ಲಿ ಮೊಬೈಲ್ ಫೋನ್ಗಳು ಮತ್ತು ಸಾಲಬಾಧೆಯಿಂದ ಸಾವಿನ ಮೊರೆ ಹೋಗುತ್ತಿರುವುದಾಗಿ ಬರೆದ ಡೆತ್ ನೋಟ್ ಪತ್ತೆಯಾಗಿದೆ. ಹಣಕಾಸಿನ ಬಿಕ್ಕಟ್ಟೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ದಾವಣಗೆರೆಯಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆ; ಡೆತ್ ನೋಟ್ ಪತ್ತೆ
Source: Zee Kannada News