ಪಂಜಾಬ್‌ನಲ್ಲಿ ಪೊಲೀಸ್ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಹರ್ಜಿತ್ ಸಿಂಗ್ ಹತ್ಯೆ ಪ್ರಕರಣದ ಆರೋಪಿ ದೀಪಕ್ ಸಿಂಗ್ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಶುಕ್ರವಾರ ರಾತ್ರಿ ಚೆಕ್‌ಪೋಸ್ಟ್ ಬಳಿ ಶಂಕಿತರು ಪೊಲೀಸರತ್ತ ಗುಂಡು ಹಾರಿಸಿದಾಗ ಪ್ರತಿದಾಳಿ ನಡೆಸಲಾಗಿತ್ತು. ಗಾಯಗೊಂಡ ದೀಪಕ್ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಪಾಕಿಸ್ತಾನ ಮೂಲದ ಉಗ್ರ ಸಂಪರ್ಕದ ಬಗ್ಗೆ ತನಿಖೆ ಮುಂದುವರಿದಿದೆ.
ಪಂಜಾಬ್ ಪೊಲೀಸ್ ಹತ್ಯೆ ಪ್ರಕರಣ: ಎನ್‌ಕೌಂಟರ್‌ನಲ್ಲಿ ಆರೋಪಿ ಸಾವು
Source: Public TV