ದಸರಾ ಹಬ್ಬ ಸಮೀಪಿಸುತ್ತಿರುವಂತೆ ಗೃಹೋಪಯೋಗಿ ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆಗಳು ಏರಿಕೆಯಾಗುತ್ತಿವೆ. ತಾಮ್ರ, ಅಲ್ಯೂಮಿನಿಯಂ, ಉಕ್ಕು ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆ ಹಾಗೂ ಸರಕು ಸಾಗಣೆ ವೆಚ್ಚ ಹೆಚ್ಚಳದಿಂದ ಉತ್ಪಾದನಾ ವೆಚ್ಚ ಹೆಚ್ಚಿದೆ. ಎಸಿ, ಫ್ರಿಜ್, ವಾಷಿಂಗ್ ಮೆಷಿನ್, ಎಲ್‌ಇಡಿ ಟಿವಿಗಳ ಬೆಲೆ ಶೇ. 3ರಿಂದ 8ರಷ್ಟು ಹೆಚ್ಚಳವಾಗಿದೆ. ಕೆಲವು ಕಂಪನಿಗಳು ಶೇ. 4ರಿಂದ 10ರಷ್ಟು ಬೆಲೆ ಏರಿಕೆ ಘೋಷಿಸಿವೆ.
ಹಬ್ಬದ ಋತುವಿನಲ್ಲಿ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಬೆಲೆ ಏರಿಕೆ
Source: Vishwavani