ಬೆಂಗಳೂರಿನ ಇಂದಿರಾನಗರದಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಹಾಕಿ ಆಟಗಾರ ಎಂ.ಎಂ. ಸೋಮಯ್ಯ ಅವರ ಮನೆಗೆ ನುಗ್ಗಿದ ಕಳ್ಳರು, ಅವರ 1980 ಮಾಸ್ಕೋ ಒಲಿಂಪಿಕ್ ಚಿನ್ನ ಸೇರಿ ನಾಲ್ಕು ಅಂತಾರಾಷ್ಟ್ರೀಯ ಪದಕಗಳನ್ನು ಕಳವು ಮಾಡಿದ್ದಾರೆ. ಅಕ್ಟೋಬರ್ 28ರ ಮುಂಜಾನೆ 2.34ಕ್ಕೆ ಇಬ್ಬರು ಅಪರಿಚಿತರು ಬಾಗಿಲು ಒಡೆದು ಒಳಗೆ ನುಗ್ಗಿದ್ದನ್ನು ಸಿಸಿಟಿವಿಯಲ್ಲಿ ಕಂಡುಬಂದಿದೆ. ಚಿನ್ನ, ಬೆಳ್ಳಿ ವಸ್ತುಗಳು ಮತ್ತು 30,000 ರೂ. ನಗದೂ ಕಳವಾಗಿದ್ದು, ತನಿಖೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಒಲಿಂಪಿಯನ್ ಸೋಮಯ್ಯ ಅವರ ಮನೆಯಲ್ಲಿ ಕಳ್ಳತನ; ಪದಕಗಳು ಕಳವು
Source: Mangalorean