ಪಶ್ಚಿಮ ಬಂಗಾಳದ ಬೀರ್ಭೂಮ್ ಜಿಲ್ಲೆಯ ತಾರಾಪೀಠದ ಹೋಟೆಲ್ ಬಿದಿಶಿನಿಯಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಏಳು ಮಂದಿ ಸಾವನ್ನಪ್ಪಿದ್ದಾರೆ. ಏರ್ ಕಂಡೀಷನರ್ನಲ್ಲಿ ಶಾರ್ಟ್ ಸರ್ಕಿಟ್ ಆಗಿ ಬೆಂಕಿ ಹರಡಿದೆ. ಸಾವನ್ ಸೋಮವಾರದ ಪ್ರಯುಕ್ತ ತಾರಾಪೀಠ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಹೋಟೆಲ್ನಲ್ಲಿ ತಂಗಿದ್ದರು. ಹೋಟೆಲ್ನ ಹಿಂಬಾಗಿಲು ಮುಚ್ಚಿದ್ದರಿಂದ ಹಲವರು ಹೊರಗೆ ಬರಲಾಗಲಿಲ್ಲ.
ಬೀರ್ಭೂಮ್ನ ಹೋಟೆಲ್ನಲ್ಲಿ ಬೆಂಕಿ: 7 ಮಂದಿ ಸಾವು
Source: Dainik Bhaskar