ಸ್ವಾತಂತ್ರ್ಯ ದಿನಾಚರಣೆಯ ದಿನದಂದು HMT ಕೈಗಡಿಯಾರಗಳ ಮಾರಾಟ ದಾಖಲೆ ಮಟ್ಟದಲ್ಲಿ ನಡೆದಿದ್ದು, ಒಂದೇ ದಿನ ₹35 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ವಿಶೇಷ ಆವೃತ್ತಿಯ ಗಡಿಯಾರಗಳ ಖರೀದಿಗೆ ಗ್ರಾಹಕರು ಎರಡು ಕಿಲೋಮೀಟರ್ಗೂ ಹೆಚ್ಚು ದೂರ ಸಾಲಿನಲ್ಲಿ ನಿಂತಿದ್ದರು. ಕಂಪನಿಯನ್ನು ಪುನಶ್ಚೇತನಗೊಳಿಸುವ ಪ್ರಯತ್ನಕ್ಕೆ ಇದು ಬಲ ನೀಡಿದೆ ಎಂದು ಅವರು ಹೇಳಿದ್ದಾರೆ.
ಸ್ವಾತಂತ್ರ್ಯ ದಿನದಂದು HMT ಗಡಿಯಾರಗಳಿಗೆ ಭರ್ಜರಿ ಬೇಡಿಕೆ
Source: OneIndia Kannada