ಟೂರಿಸ್ಟ್ ವಾಹನ ಪರ್ಮಿಟ್ ಶುಲ್ಕ ಇಳಿಕೆ: ಕೇಂದ್ರದ ಮಹತ್ವದ ನಿರ್ಧಾರ

ಟೂರಿಸ್ಟ್ ವಾಹನ ಪರ್ಮಿಟ್ ಶುಲ್ಕ ಇಳಿಕೆ: ಕೇಂದ್ರದ ಮಹತ್ವದ ನಿರ್ಧಾರ

ಕೇಂದ್ರ ಸರ್ಕಾರವು ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ (AITP) ಶುಲ್ಕವನ್ನು ಗಣನೀಯವಾಗಿ ಕಡಿತಗೊಳಿಸಲು ಮುಂದಾಗಿದೆ. ಹೊಸ ಕರಡು ನಿಯಮದಂತೆ, 5 ಸೀಟ್ಗಳಿಗಿಂತ ಕಡಿಮೆ ಸಾಮರ್ಥ್ಯದ ವಾಹನಗಳಿಗೆ ಶುಲ್ಕ ₹20,000ದಿಂದ ₹15,000ಕ್ಕೆ, 5-10 ಸೀಟ್ ವಾಹನಗಳಿಗೆ ₹30,000ದಿಂದ ₹22,500ಕ್ಕೆ ಇಳಿಕೆಯಾಗಲಿದೆ. 10-23 ಸೀಟ್ ವಾಹನಗಳಿಗೆ ₹80,000ದಿಂದ ₹60,000ಕ್ಕೆ, 23 ಸೀಟ್ಗಿಂತ ಹೆಚ್ಚಿನವುಗಳಿಗೆ ₹3 ಲಕ್ಷದಿಂದ ₹2.25 ಲಕ್ಷಕ್ಕೆ ಕಡಿತವಾಗಲಿದೆ. ಸಾರ್ವಜನಿಕರ ಆಕ್ಷೇಪಣೆ ಮತ್ತು ಸಲಹೆಗಳನ್ನು 30 ದಿನಗಳ ಕಾಲ ಸ್ವೀಕರಿಸಿ, ನಂತರ ಅಂತಿಮ ನಿಯಮ ಜಾರಿಗೊಳಿಸಲಾಗುವುದು.

Source: Zee Kannada News

More in Business & Finance

Read the live feed on ZapIndies