ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಅಮ್ಟಾಡಿಯ 87 ವರ್ಷದ ಜೂಲಿಯಾನ ಅವರಿಗೆ ಅಂಚೆ ಇಲಾಖೆ ಸಿಬ್ಬಂದಿ ಮನೆಗೆ ತೆರಳಿ ಆಧಾರ್ ನವೀಕರಿಸಿದ್ದಾರೆ. ವಾಹನ ಸಂಚಾರಕ್ಕೆ ರಸ್ತೆ ಇಲ್ಲದ ಕಾರಣ ಸುಮಾರು 1 ಕಿ.ಮೀ. ದೂರ ಕಂಪ್ಯೂಟರ್ ಹೊತ್ತು ನಡೆದು ಸ್ಥಳದಲ್ಲೇ ಬಯೋಮೆಟ್ರಿಕ್ ಮತ್ತು ಮೊಬೈಲ್ ನಂಬರ್ ಅಪ್ಡೇಟ್ ಮಾಡಿದ್ದಾರೆ. ಪುತ್ತೂರು ವಿಭಾಗದಲ್ಲಿ ಈವರೆಗೆ 100ಕ್ಕೂ ಅಧಿಕ ಮನೆಗಳಿಗೆ ಈ ಸೇವೆ ಒದಗಿಸಲಾಗಿದೆ.
ಬಂಟ್ವಾಳದಲ್ಲಿ 87ರ ವೃದ್ಧೆಗೆ ಮನೆಗೇ ಆಧಾರ್ ಸೇವೆ
Source: News18 Kannada