ಖ್ಯಾತ ಎಂಟಿಆರ್ ಹೋಟೆಲ್ ತಿಂಡಿ-ತಿನಿಸುಗಳ ದರವನ್ನು ನವೆಂಬರ್ 8ರಿಂದ ಏರಿಸಲಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಹೊಸ ದರದಲ್ಲಿ ಕಾಫಿ 75 ರೂ., ಮಸಾಲೆ ದೋಸೆ 175 ರೂ., ರವೆ ಈರುಳ್ಳಿ ದೋಸೆ 200 ರೂ. ಹಾಗೂ ಎಂಟಿಆರ್ ವಿಶೇಷ ಊಟ 390 ರೂ. ನಿಗದಿಯಾಗಿದೆ. ರಾಜ್ಯದ ಹಲವು ಹೋಟೆಲ್‌ಗಳಲ್ಲಿ ಈಗಾಗಲೇ ದರ ಏರಿಕೆ ಆಗಿರುವ ಬೆನ್ನಲ್ಲೇ ಈ ಪರಿಷ್ಕರಣೆ ನಡೆದಿದೆ.
ಎಂಟಿಆರ್ ಹೋಟೆಲ್ ತಿಂಡಿ ದರ ಏರಿಕೆ: ನ. 8ರಿಂದ ಜಾರಿ
Source: Kannada Dunia