ಕೋಲ್ಕತ್ತಾದ ಮಿರ್ಜಾ ಗಾಲಿಬ್ ಸ್ಟ್ರೀಟ್ನ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಶುಕ್ರವಾರ 'ಶಿಖಾ ಇನ್' ಹೋಟೆಲ್ ಅನ್ನು ಗುತ್ತಿಗೆ ಪಡೆದಿದ್ದ ಅಬು ಜಾಫರ್ ಎಂಬಾತನನ್ನು ಬಂಧಿಸಿದೆ. ಹೋಟೆಲ್ನ ಮೂಲ ಮಾಲೀಕ ಬಿರೇಶ್ವರ್ ಮಿತ್ರ ಪರಾರಿಯಾಗಿದ್ದು, ಹೋಟೆಲ್ ಸಿಬ್ಬಂದಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕೋಲ್ಕತ್ತಾ ಕಟ್ಟಡ ಬೆಂಕಿ: ಒಬ್ಬರ ಬಂಧನ, ಇಬ್ಬರ ವಶಕ್ಕೆ
Source: Mangalorean