ಮಂಡ್ಯದ ಗುತ್ತಲು ಬಡಾವಣೆಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ವೃದ್ಧೆ ನೂರ್ ಅವರು ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಅಂತ್ಯಸಂಸ್ಕಾರದ ನಂತರ ಅವರ ಮನೆಯಲ್ಲಿ ಲಕ್ಷಾಂತರ ರೂಪಾಯಿ ನಗದು ಮತ್ತು ನಾಣ್ಯಗಳು ಪತ್ತೆಯಾಗಿವೆ. ಸ್ಥಳೀಯರು ಎಣಿಕೆ ಮಾಡಿದಾಗ 8 ಲಕ್ಷ ರೂ.ಗೂ ಅಧಿಕ ಹಣ ಇರುವುದು ಕಂಡುಬಂದಿದೆ. ಈ ಹಣವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಹಂಚಿಕೆ ಆರೋಪ ಕೇಳಿಬಂದಿದೆ.
ಮಂಡ್ಯದಲ್ಲಿ ಭಿಕ್ಷುಕಿ ಸಾವು, ಮನೆಯಲ್ಲಿ 8 ಲಕ್ಷ ರೂ. ಪತ್ತೆ
Source: Zee Kannada News